Anna Bhagya salt chemical Problem in Ramanagara

ಹಸಿವು ಮುಕ್ತ ಕರ್ನಾಟಕಕ್ಕಾಗಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಇದರಡಿ ಕಡಿಮೆ ಬೆಲೆಗೆ ಪಡಿತರ ನೀಡ್ತಿದೆ. ಆದ್ರೆ, ಸರ್ಕಾರ ನೀಡೋ ಅಯೋಡಿನ್ ಯುಕ್ತ ಉಪ್ಪು ಎಷ್ಟು ಸೇಫ್ ಅನ್ನೋದು ಈ ಪಡಿತರ ಪಡೀತಿರೋ ಜನ್ರ ಪ್ರಶ್ನೆ. ರಾಮನಗರದ ವಿಜಯನಗರದಲ್ಲಿ ಅನ್ನಭಾಗ್ಯ ಯೋಜನೆಯಡಿ ಸಿಗೋ ಉಪ್ಪು ಹಾಕಿ ಅನ್ನ ಮಾಡಿದ್ರೆ, ಕಪ್ಪು ಬಣ್ಣಕ್ಕೆ ತಿರುಗುತ್ತೆ. ಇನ್ನು, ಬಿಸಿ ನೀರಿನಲ್ಲಿ ಈ ಉಪ್ಪು ಹಾಕಿದ್ರೆ ಕಂದು, ನೀಲಿ ಬಣ್ಣಕ್ಕೆ ಬದಲಾಗುತ್ತೆ. ಸರ್ಕಾರ ಪರಿಶುದ್ಧ ಅಂತ ಕೊಡ್ತಿರೋ ಉಪ್ಪಿನಲ್ಲಿ ಕೆಮಿಕಲ್ಸ್ ಮಿಕ್ಸ್ ಆಗಿದೆ ಅನ್ನೋದು ಜನರ ಆರೋಪ. ಇದನ್ನ ತಿಂದು ಆರೋಗ್ಯ ಕೆಟ್ಟರೆ ಯಾರು ಹೊಣೆ. ಕಡಿಮೆ ಬೆಲೆಗೆ ನಿಮ್ಮ ಹಸಿವು ನೀಗಿಸ್ತೀವಿ ಅಂತ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನ ನೀಡಲಾಗ್ತಿದೆ ಅಂತ ಜನ ಆಕ್ರೋಶ ವ್ಯಕ್ತಪಡಿಸ್ತಾರೆ.

source: Tv 9 youtube channel



No comments:

Post a Comment

Popular Posts

Tags