2050ರ ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿಯಾಗಲಿದೆ!

·         2050 ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿಯಾಗಲಿದೆ ಎಂದು ಪ್ಯೂ (Pew) ರಿಸರ್ಚ್ ಸೆಂಟರ್ ವರದಿಯಲ್ಲಿ ಹೇಳಲಾಗಿದೆ.
·        2050 ವೇಳೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 31.1 ಕೋಟಿ ತಲುಪಲಿದೆ. ಅಂದರೆ, ಜಾಗತಿಕ ಮಟ್ಟದಲ್ಲಿ ಶೇ.11 ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಭಾರತ!.
·        ಅದೇ ವೇಳೆ ಅತೀ ಹೆಚ್ಚು ಹಿಂದೂ ಜನಸಂಖ್ಯೆ ಹೊಂದಿರುವ ದೇಶ ಭಾರತದಲ್ಲಿ,  2050 ವೇಳೆ ಹಿಂದೂಗಳ ಜನಸಂಖ್ಯೆ 130 ಕೋಟಿ ಆಗಿ ಏರಿಕೆಯಾಗಲಿದೆ.
·        ಪ್ರಸ್ತುತ  ಇಂಡೋನೇಷ್ಯಾದಲ್ಲಿ ಅತೀ ಹೆಚ್ಚು ಮುಸ್ಲಿಂ ಜನರಿದ್ದಾರೆ. ಫಲವತ್ತತೆಯ ದರ (ಫರ್ಟಿಲಿಟಿ) ಹೆಚ್ಚಾಗಿರುವುದೇ ಜನಸಂಖ್ಯೆ ಏರಿಕೆಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.
·        ಭಾರತದಲ್ಲಿರುವ  ಮುಸ್ಲಿಂ ಮಹಿಳೆಯರು ಸರಾಸರಿ 3ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ, ಹಿಂದೂ ಮಹಿಳೆಯರು ಸರಾಸರಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ, ಅದೇ ವೇಳೆ ಕ್ರೈಸ್ತ ಮಹಿಳೆ ಸರಾಸರಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ.
·        2010ರಲ್ಲಿ 14.4 % ಇದ್ದ ಮುಸ್ಲಿಂ ಜನಸಂಖ್ಯೆ  2050 ವೇಳೆ 18.4 % ಆಗಿ ಏರಿಕೆಯಾಗಲಿದೆ.
·        ಏತನ್ಮಧ್ಯೆ, ಭಾರತದಲ್ಲಿ ನಾಲ್ಕರಲ್ಲಿ ಮೂರು ಮಂದಿ ಹಿಂದೂಗಳಿರಲಿದ್ದಾರೆ.
ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಇಂಡೋನೇಷ್ಯಾ, ನೈಜೇರಿಯಾ ಮತ್ತು ಬಾಂಗ್ಲಾದೇಶದಲ್ಲಿರುವ ಮುಸ್ಲಿಮರ ಸಂಖ್ಯೆಯನ್ನು ಒಟ್ಟುಗೂಡಿಸಿದರೂ ಭಾರತದಲ್ಲಿರುವ  ಹಿಂದೂಗಳ ಸಂಖ್ಯೆ ಇದಕ್ಕಿಂತ ಹೆಚ್ಚಿದೆ.
·    ಭಾರತದಲ್ಲಿರುವ ಒಟ್ಟು ಜನಸಂಖ್ಯೆಯ 2.5%ರಷ್ಟು ಕ್ರೈಸ್ತ ಸಮುದಾಯದವರಿದ್ದಾರೆ. 2050ರವೇಳೆಗೆ ಇವರ ಜನಸಂಖ್ಯೆ 2.3% ಆಗಿ ಕುಸಿಯಲಿದೆ.
·        ಅದೇ ವೇಳೆ ಜಗತ್ತಿನಲ್ಲಿ ಅತೀ ಹೆಚ್ಚು ವೇಗವಾಗಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದೆ ಎಂದು  ವರದಿಯಲ್ಲಿ ಹೇಳಿದೆ.
Source: www.prajavani.net

No comments:

Post a Comment

Popular Posts

Tags