ರೈಲುಗಳ ಸಂಚಾರ ವೇಗ ಹೆಚ್ಚಳಕ್ಕೆ ಇಲಾಖೆ ಸಿದ್ಧತೆ


·        ರಾಜ್ಯದ ಕೆಲವು ಮಾರ್ಗಗಳಲ್ಲಿ ರೈಲುಗಳ ವೇಗವನ್ನು ಗಂಟೆಗೆ ಸರಾಸರಿ ಕನಿಷ್ಠ 15ರಿಂದ 20 ಕಿ.ಮೀವರೆಗೆ ಹೆಚ್ಚಿಸಲು ನೈರುತ್ಯ ರೈಲ್ವೆ ತೀರ್ಮಾನಿಸಿದೆ.
·        ಈಗಾಗಲೇ ಎರಡು ಮಾರ್ಗಗಳಲ್ಲಿ ರೈಲುಗಳು ನಿಗದಿಗಿಂತ ಹೆಚ್ಚು ವೇಗವಾಗಿ ಸಂಚರಿಸುತ್ತಿವೆ.
ಹೊಸದುರ್ಗ ಚಿಕ್ಕಜಾಜೂರು ನಡುವಿನ ರೈಲು ಸಂಚಾರವನ್ನು ಗಂಟೆಗೆ 90 ರಿಂದ 100 ಕಿ.ಮೀಗೆ ಹೆಚ್ಚಿಸಲಾಗಿದೆ.
ಹಾಸನಅರಸೀಕೆರೆ ನಡುವಿನ ರೈಲುಗಳ ವೇಗವನ್ನು ಗಂಟೆಗೆ 60 ರಿಂದ 80 ಕಿ.ಮೀಗೆ ಹೆಚ್ಚಿಸಲಾಗಿದೆ.
ಪ್ರಾಯೋಗಿಕವಾಗಿ ಎರಡೂ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದು ಯಶಸ್ವಿಯಾಗಿರುವುದರಿಂದ ಇನ್ನೂ ಕೆಲವು ಮಾರ್ಗಗಳಿಗೆ ವಿಸ್ತರಿಸಲಾಗುವುದು ಎನ್ನುತ್ತಾರೆ ಹಿರಿಯ ರೈಲ್ವೆ ಅಧಿಕಾರಿಗಳು.

ಹೊಸದಾಗಿ ಎಲ್ಲಿ?:
·        ಅಜ್ಜಂಪುರಹೊಸದುರ್ಗ (ಗಂಟೆಗೆ 90 ರಿಂದ 100 ಕಿ.ಮೀ),
·        ಬೆಂಗಳೂರುಮೈಸೂರು (70 ರಿಂದ 90 ಕಿ.ಮೀ),
·        ಶಿವಮೊಗ್ಗತಾಳಗುಪ್ಪ (50 ರಿಂದ 70 ಕಿ.ಮೀ),
·        ಯಶವಂತಪುರತುಮಕೂರು (90 ರಿಂದ 100 ಕಿ.ಮೀ),
·        ಬೆಂಗಳೂರುಧರ್ಮಾವರಂ (ಶೇ 90 ರಿಂದ 100 ಕಿ.ಮೀ),
·        ಮೈಸೂರುಚಾಮರಾಜನಗರ (70 ರಿಂದ 100 ಕಿ.ಮೀ) ಹಾಗೂ
·        ಹಾಸನಸಕಲೇಶಪುರ (65 ರಿಂದ 70 ಕಿ.ಮೀ)
ಮೇಲ್ಕಂಡ  ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ವೇಗವನ್ನು 2ನೇ ಹಂತದಲ್ಲಿ ಹೆಚ್ಚಿಸಲು ಉದ್ದೇಶಿಸಲಾಗಿದ.

No comments:

Post a Comment

Popular Posts

Tags