ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ ಜಾರಿ


ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಿಸುವ ಕಾಯ್ದೆಯು ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವಿಷಯಗಳ ಹಿಂಸೆಗಳಿಂದ ರಕ್ಷಿಸುತ್ತದೆ. ಇಂತಹ ಪ್ರಾಸಂಗಿಕ ಪ್ರಕರಣಗಳ ನ್ಯಾಯ ವಿಚಾರಣೆ ಮಾಡಲು “ವಿಶೇಷ ನ್ಯಾಯಾಲಯಳು ರಾಜ್ಯದಲ್ಲಿ. ಸ್ಥಾಪಿತಗೊಂಡಿದೆ.

ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ.1956 ಮತ್ತು ವಾಡ್ರ್ಸ್ ಕಾಯ್ದೆ, 1860: ಭಾರತದಲ್ಲಿ ದತ್ತು ಸಕ್ರಿಯವಾಗಿ ಏಕ ರೀತಿಯ ಕಾಯ್ದೆ ಇಲ್ಲದೆ ಇರುವುದರಿಂದ ಆಯಾ ಧರ್ಮಕ್ಕೆ ಅನುಗುಣವಾಗಿ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಪ್ರಮುಖವಾಗಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ಮತ್ತು ವಾಡ್ರ್ಸ್ ಕಾಯ್ದೆ, 1860 ಈ ಎರಡು ಕಾಯ್ದೆಯಡಿಯಲ್ಲಿ ದತ್ತು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ

ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಅಡಿಯಲ್ಲಿನ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು ರಕ್ಷಣೆ, ಸಹಕಾರ ಮತ್ತು ಪುನರ್ವಸತಿಯ ಸೇವೆಗಳು:

ಮಕ್ಕಳ ಸಹಾಯವಾಣಿ ಸೇವೆ: ಸಂಕಷದಲ್ಲಿರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸುವ ಸಲುವಾಗಿ ಮಕ್ಕಳ ಸಹಾಯವಾಣಿಯು ದೇಶದಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಸುರಕ್ಷಿತ ಜಾಲವನ್ನು ಪ್ರತಿಯೊಂದು ಮಗುವೂ ತಲುಪುವ ಗುರಿಯನ್ನು ಮಕ್ಕಳ ಸಹಾಯವಾಣಿ ಹೊಂದಿರುತ್ತದೆ. ಮಕ್ಕಳ ಸಹಾಯವಾಣಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತ ಸರ್ಕಾರದ ಮಕ್ಕಳ ರಕ್ಷಣಾ ಸೇವೆಗಳಲ್ಲಿ ಪ್ರಮುಖವಾದುದಾಗಿದೆ. ಈ ಕಾರ್ಯಕ್ರಮವನ್ನು 1999ರಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಕ್ಕೆ ತರಲಾಗಿದ್ದು, ರಾಜ್ಯದಲ್ಲಿ 24 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದೆ.

ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್, ಮುಂಬೈ, ಇದು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ದೇಶದ ಎಲ್ಲಾ ನಗರ ಹಾಗೂ ಜಿಲ್ಲೆಗಳಲ್ಲಿ ಮಕ್ಕಳ ಸಹಾಯವಾಣಿ ಸೇವೆಗಳನ್ನು ಅನುಷ್ಠಾನಗೊಳಿಸಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ಈ ಸಂಸ್ಥೆಯನ್ನು ಭಾರತ ಸರ್ಕಾರವು ರಾಷ್ಟ್ರಮಟ್ಟದ ಮಾತೃ ಸಂಸ್ಥೆಯಾಗಿ ಗುರುತಿಸಿದೆ.

ಮಕ್ಕಳ ಸಹಾಯವಾಣಿ ಸೇವೆಯು, ಮಂಗಳೂರು, ಬೆಂಗಳೂರು, ಕಲ್ಬುರ್ಗಿ, ಬೀದರ್, ಧಾರವಾಡ, ದಾವಣಗೆರೆ, ಮೈಸೂರು, ಶಿವಮೊಗ್ಗ, ಮಂಡ್ಯ, ಬಳ್ಳಾರಿ, ಕೋಲಾರ, ಹಾಸನ, ಕೊಪ್ಪಳ, ಕೊಡಗು, ತುಮಕೂರು, ಬೆಳಗಾವಿ, ವಿಜಯಪುರ, ಉಡುಪಿ, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಯಾದಗಿರಿ, ಗದಗ, ಒಳಗೊಂಡಂತೆ ಒಟ್ಟು 24 ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.

ನಗರ ಮತ್ತು ಅರೆನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು: 
ನಗರ ಮತ್ತು ಅರೆನಗರ ಪ್ರದೇಶಗಳಲ್ಲಿ ಕುಟುಂಬದ ಬೆಂಬಲ ಇಲ್ಲದ, ಪಾಲನೆ ಮತ್ತು ಪೋಷಣೆಯ ಅಗತ್ಯವುಳ್ಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೆಂಬಲ ಒದಗಿಸುವುದೇ ಈ ಕಾರ್ಯಕ್ರಮದ ಗುರಿಯಾಗಿರುತ್ತದೆ - ಮುಖ್ಯವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ಚಿಂದಿ ಆಯುವ ಮಕ್ಕಳು, ಬೀದಿ ಮಕ್ಕಳು, ಕೆಲಸ ಮಾಡುವ ಮಕ್ಕಳು, ಅನಾಥ ಮಕ್ಕಳು, ಸಾಗಾಣೆಯಾದ ಮಕ್ಕಳು, ಪರಿತ್ಯಜಿಸಲ್ಪಟ್ಟ ಮಕ್ಕಳು, ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಬೀದಿ ಮಕ್ಕಳು.

ಉದ್ದೇಶಗಳು:- • ಅನಾಥ ಹಾಗೂ ಅಲಕ್ಷ್ಯ ಬೀದಿ ಮಕ್ಕಳಿಗೆ ಈ ತಂಗುದಾಣಗಳು, ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ಸ್ವಚ್ಚತೆ ಹಾಗೂ ನೈರ್ಮಲ್ಯ, ಕುಡಿಯುವ ಶುದ್ದ ನೀರು, ಶಿಕ್ಷಣ, ಆಟಪಾಠಗಳಿಗೆ ಇತರೆ ಸೌಕರ್ಯಗಳನ್ನು ಒದಗಿಸಿ ಅವರಿಗೆ ಶೋಷಣೆ/ದೌರ್ಜನ್ಯಗಳ ವಿರುದ್ದ ರಕ್ಷಣೆಯನ್ನು ಒದಗಿಸುವುದು. • ಬೀದಿ ಮಕ್ಕಳನ್ನು ಶಾಲೆಗಳಿಗೆ / ಕೆಲಸಕ್ಕೆ ಸೇರಿಸುವುದು, ವೃತ್ತಿಪರ ಶಿಕ್ಷಣ ನೀಡುವುದು, ಆರೋಗ್ಯ ಸೇವೆಗಳನ್ನು ಒದಗಿಸುವುದು ಹಾಗೂ ಅವರಲ್ಲಿ ಸಾಮಾನ್ಯವಾಗಿರುವ ಊIಗಿ/ಂIಆS ರೋಗ ಹಾಗೂ ಮಾದಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು. ಮನೆ ಅಥವಾ ಕುಟುಂಬದ ಬೆಂಬಲ ಇಲ್ಲದಿರುವ ಬೀದಿ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 24 ಗಂಟೆ ತೆರೆದಿರುವ ತಂಗುದಾಣಗಳನ್ನು ನಡೆಸಲಾಗುತ್ತಿದೆ. ಅಲ್ಲದೇ 2014-15ನೇ ಸಾಲಿಗೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹೊಸದಾಗಿ 18 ಮಕ್ಕಳ ತೆರೆದ ತಂಗುದಾಣಗಳಿಗೆ ಅನುಮೋದನೆ ನೀಡಿದ್ದು, ಈ ಹೊಸ 18 ತೆರೆದ ತಂಗುದಾಣಗಳು 2014ರ ಅಕ್ಟೋಬರ್ ಮಾಹೆಯಿಂದ ಕಾರ್ಯಾರಂಭ ಮಾಡಿರುತ್ತವೆ.

ರಾಜ್ಯದಲ್ಲಿ ಪ್ರಸ್ತುತ ಒಟ್ಟು 42 ಮಕ್ಕಳ ತೆರೆದ ತಂಗುದಾಣಗಳಿರುತ್ತವೆ. ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡ 90 ರಷ್ಟು ಕೇಂದ್ರ ಸರ್ಕಾರವು ಹಾಗೂ ಉಳಿದ ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಯು ಭರಿಸಬೇಕಾಗುತ್ತದೆ. ಪ್ರಸ್ತುತ 18 ಜಿಲ್ಲೆಗಳಲ್ಲಿ 42 ತೆರೆದ ತಂಗುದಾಣಗಳನ್ನು 40 ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.
Source: web8.kar.nic.in/diprpressandnews

No comments:

Post a Comment

Popular Posts

Tags