ರಾಜ್ಯಕ್ಕೆ ಪಂಚಾಯತ್ ರಾಜ್ ಪ್ರಶಸ್ತಿಗಳು
·
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸಮರ್ಥ ಬಳಕೆಗಾಗಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ ಅವರು 24/4/2017 ರಂದು ಲಕ್ನೋನಲ್ಲಿ ರಾಷ್ಟ್ರೀಯ ಇ-ಪುರಸ್ಕಾರ್ ಪ್ರಶಸ್ತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸ್ವೀಕರಿಸಿದರು.
·
ರಾಜ್ಯವು ಸತತ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆಯುತ್ತಿದೆ.
·
ಏಪ್ರಿಲ್ 24 ರಂದು ಆಚರಿಸುವ ರಾಷ್ಟ್ರೀಯ ಪಂಚಾಯತ್ರಾಜ್ ದಿವಸ್ ಸಂದರ್ಭದಲ್ಲಿ ಎಲ್ಲಾ ಹಂತದ ಪಂಚಾಯತ್ರಾಜ್ ಸಂಸ್ಥೆಗಳಿಗೆ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತಿದೆ.
·
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸುತ್ತಿರುವ ಗಾಂಧೀ ಸಾಕ್ಷಿ ಕಾಯಕ ತಂತ್ರಾಂಶದ ಮಹತ್ವ ಹಾಗೂ ದಕ್ಷತೆಗೆ ಕೇಂದ್ರ ಸರ್ಕಾರ ಈ ಗೌರವ ನೀಡಿದೆ.
·
ಇದೇ ಸಂದರ್ಭದಲ್ಲಿ ನಾನಾಜಿ ದೇಖಮುಖ ರಾಷ್ಟ್ರೀಯ ಗೌರವ ಗ್ರಾಮಸಭಾ ಪುರಸ್ಕಾರವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಸ್ವೀಕರಿಸಿದರು.
·
ದೀನದಯಾಳ್ ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ಕೊಡಗು ಜಿಲ್ಲಾ ಪಂಚಾಯತಿ, ಸಾಗರ, ಪೂತ್ತೂರು ತಾಲ್ಲೂಕು ಪಂಚಾಯತಿಗಳು ಹಾಗೂ ತುಮಕೂರು ಜಿಲ್ಲೆಯ ಕೆಸರಮಡು, ಬೆಳಗಾವಿ ಜಿಲ್ಲೆಯ ಶಿರಗುಪ್ಪಿ, ಕೊಡಗು ಜಿಲ್ಲೆಯ ಪಾಲಿಬೆಟ್ಟ, ಮಡಿಕೇರಿ ತಾಲ್ಲೂಕಿ ಸಂಪಾಜೆ ಗ್ರಾಮ ಪಂಚಾಯತಿಗಳಿಗೆ ವಿತರಿಸಲಾಯಿತು.


No comments:
Post a Comment